ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಏಪ್ರಿಲ್, 2026 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ದಿ ವಿಕ್ಕಿ & ದ ವೈರಸ್ - ಭಾಗ 1

ಅದು ಶುಕ್ರವಾರದ ಮಧ್ಯಾಹ್ನ. ದಾವಣಗೆರೆಯ ಬಿಸಿಲ ಧಗೆಗೆ ಮೈಯೊಡ್ಡಿ, ತನ್ನ ಹಳೆಯ ಸೈಕಲ್ ತುಳಿದುಕೊಂಡು ಮನೆಗೆ ಹೊರಟಿದ್ದ ವಿಕಿ, ಎಂದಿನಂತೆ ತನ್ನ ಪಾಡಿಗೆ ತಾನು ಹೋಗುತ್ತಿದ್ದ. ರಸ್ತೆಬದಿಯ ಬಿರಿಯಾನಿ ಅಂಗಡಿಯಿಂದ ಬರುತ್ತಿದ್ದ ಘಮಲಿನತ್ತ ಮೂಗು ಹೊರಳಿಸಿ, "ಇವತ್ತು ಮನೆಯಲ್ಲಿ ಏನಿದೆಯೋ ದೇವರೇ.!" ಎಂದು ಅಂದುಕೊಂಡ. ವಿಕಿಗೆ ಊಟಕ್ಕಿಂತ ಹೆಚ್ಚಾಗಿ, ಸಂಜೆಯ ವೇಳೆಗೆ ಅವನನ್ನು ಕಾಯುತ್ತಿದ್ದ "ಸ್ನೇಹಿತ"ನ ಬಗ್ಗೆ ಕುತೂಹಲವಿತ್ತು. ವಿಕಿಯದು ಹಳೆಯ, ಚಿಕ್ಕದಾದ ಮನೆ. ವಿಕಿಗೆ ಆ ಮನೆ ಸ್ವರ್ಗ. ಮುಖ್ಯವಾಗಿ ಒಂದು ಕಾರಣಕ್ಕೆ: ಅವನ ರೂಮ್‌ನಲ್ಲಿ, ಕಪಾಟಿನ ಹಿಂದೆ, ಇಟ್ಟಿಗೆ ಗೋಡೆಯ ಸಂದಿಯಲ್ಲಿ "ವೈರಸ್" ಇರುತ್ತಾನೆ. ಹೆಸರೇ ಹೇಳುವಂತೆ ವೈರಸ್, ವಿಕಿಗೆ ತಮಾಷೆ ಮಾಡುತ್ತಾನೆ, ವಿಕಿಯನ್ನು ಹೆದರಿಸುತ್ತಾನೆ, ಆದರೆ ಎಂದಿಗೂ ನೋಯಿಸುವುದಿಲ್ಲ. ವೈರಸ್ ಒಬ್ಬ ದೆವ್ವ, ವೈರಸ್ ವಿಕಿಗೆ ಮಾತ್ರ ಕಾಣಿಸುತ್ತಾನೆ. ಇಬ್ಬರೂ ಉತ್ತಮ ಸ್ನೇಹಿತರು. ವಿಕಿ ಮನೆಯೊಳಗೆ ಕಾಲಿಡುತ್ತಿದ್ದಂತೆ, ರೂಮಿನೊಳಗೆ ಒಂದು ವಿಚಿತ್ರ ಸದ್ದು ಕೇಳಿಸಿತು. ತಟ್ಟೆಗಳು ಪರಸ್ಪರ ಬಡಿದಾಡಿದಂತೆ, ಗಾಳಿಯಲ್ಲಿ ಒಂದು ತರಂಗ ಹರಿದು ಹೋದಂತೆ. "ವೈರಸ್.!" ವಿಕಿ ನಕ್ಕ. "ಇವತ್ತು ಯಾವ ಕಿರಿಕ್ ಶುರು ಮಾಡಿದ್ದೀಯಪ್ಪ?" "ವಿಕಿ.! ಬಂದ್ಯಾ? ಎಷ್ಟು ಹೊತ್ತು ಕಾಯಿಸುವುದು?" ಗಾಳಿಯಲ್ಲೇ ಒಂದು ಧ್ವನಿ ಕೇಳಿಸಿತು. ಅದು ಎಲ...